Tuesday, October 15, 2013

ನಾ ಕಂಡ ಜಟ್ಟ!!!



ಜಟ್ಟ-ನನ್ನ ಮಟ್ಟಿಗೆ ಇದು ಒಂಧು ಅದ್ಭುತ ಧೃಶ್ಯಕಾವ್ಯ. ಒಂಧು ಒಳ್ಳೆ ಕಾದಂಬರಿ ಓದಿದ ಅನುಭವ.




ಲೂಸಿಯ ಸಂವಾದದಲ್ಲಿ ಗಿರಿರಾಜ ಎಂಬ ಸೃಜನಶೀಲವೈಕ್ತಿ ತುಂಬಾ ಸ್ಪಷ್ಟವಾಗಿ, ದಿಟ್ಟವಾಗಿ ಆಡಿದ ಮಾತುಗಳನ್ನು ಕೇಳಿ ನಿಬ್ಬೆರಾಗಧೆ. ಅವರದೇ ನಿರ್ದೇಶನದ ನವಿಲಾದರೂ ಕಿರು ಚಿತ್ರ ನೋಡಿ ಪುಳಕಿತನಾದೆ. ಜಟ್ಟ ಸಿನೆಮಾ ಗಿರಿರಾಜ ನಿರ್ದೇಶನದ ಎರಡನೇ ಚಿತ್ರ. ಅವರಿಗಿರುವ ಸ್ತಿರ ಪ್ರಜ್ಞೆ, ಪರಿಕಲ್ಪನೆ, ಸಂಬಾಷಣೆಯಲ್ಲಿಯ ಹಿಡಿತ, ಸಿನಿಮಾದ ಜ್ಞಾನ, ಪಾತ್ರಗಳ ಸಮತೋಲನಾ, ಇವೆಲ್ಲದರ ಪ್ರತಿಬಿಂಬವೇ ಜಟ್ಟ.



ಲೂಸಿಯಾ ಸಂವಾದದಿಂದ ಹೊರ ಬಂಧ ನಾನು ಜಟ್ಟ ನೋಡಲೇಬೇಕೆಂದು ನಿರ್ದಾರಿಸಿಧೆ. ಅದರಂತೆ ಗೋಪಾಲನ ಸಿನೆಮಸ್‌ಗೆ ಹೋಗಿ ಕುಳಿತ ನನಗೆ ಸಿನೆಮಾದ ಮೊದಲನೇ ಪುಟ ತರಚಿಕೊಂಡಂತೆ, ನನ್ನ ಕುತೂಹಲ ಹೆಚ್ಚಾಯಿತು. ಶುರುವಿನಲ್ಲೇ  ಗುರುವಿನ ವೆಸ್ಟರ್ನ್ ಕಲ್ಚರ್ ಹಾಗೂ ನಮ್ಮ ತನದ ಉಳಿವಿಕೆ ಬಗ್ಗೆ ಮಾತನಾಡಿದ ವೈಖಿರಿ, ಅಲಲ್ಲಿ ಕೆಲವು ಅರ್ಥಗರ್ಬಿತ ಸಂಬಾಷಣೆ ನಮನ್ನು ಕಾಡಲು ಶುರುಮಾಡುತ್ತೆ  "ಮೀನ್ ಹಿಡಿಲಿಕ್ಕೋಗಿ, ಮೊಸಳೆ ಹಿಡಿದವರ ಕಥೆ ಗೊತ್ತ ಜಟ್ಟ" "ನಿನ್ನ ಅಪ್ಪ ಅಮ್ಮ ಯಾರು ಅಂತ ನಿನಗೋತಿರಬೇಕು, ಆದ್ರೆ ಅಪ್ಪ ಯಾರಾಗ್ತರಂತ ಡಿಸೈಡ್ ಮಾಡೋ ಹಕ್ಕು ಅಮ್ಮಂಗ್ ಮಾತ್ರ ಇರಬೇಕು".  ಇನ್ನು ಕಥೆಯಲ್ಲಿ ವಿವರಿಸುವ ರಾಜಕೀಯ ಲಾಭಕ್ಕಾಗಿ,ವ್ಯವಹಾರಕ್ಕಾಗಿ ಹೇಗೆ ಬಳಕೆಯಾಗುತ್ತೆ ಎ೦ಬುದು ಸಹ ನಿಜವೇ ಆಗಿದೆ. ಪಾರ್ವತಿ-ಪಶುಪತಿಯ ಬಗೆಗಿನ ಸ್ವಾರಸ್ಯಕರ ಸ೦ಭಾಷಣೆ, ಜಟ್ಟನ ಕೆಲಸ ಖಾಯ೦ ಮಾಡಲು ಅದರ ಹಿ೦ದೆ ನಡೆಯುವ ಜಾತಿ ಲೆಕ್ಕಾಚಾರಗಳು ನನಗೆ ಇಷ್ಟವಾದ ಸ೦ಭಾಷಣೆಗಳು.









 Female protagonist ಆಗಿ ನಿರ್ವಹಿಸಿದ ಸುಕ್ರತ (ಸಾಗರಿಕಾ ಪಾತ್ರ ),   ನಿಷ್ಟಾವಂತ ಫಾರೆಸ್ಟ್ ಗಾರ್ಡ್ ಆಗಿ  ಕಿಶೋರ್ (ಜಟ್ಟ), ಪ್ರಾಮಾಣಿಕ ಪೋಲೀಸ್ ಅಧಿಕಾರಿ ಆಗಿ ಪ್ರೆಮ್‌ (ಭೀಮ ಕುಮಾರ) ಪಾತ್ರ ನಿಜ್ಜಕು ಶ್ಲಾಗನೀಯ!!!. ಅದರಲ್ಲೂ ಸುಕ್ರತ, ಕಿಶೋರ್ ನಾ ಅಭಿನಯ ಅದ್ಭುತ, ಅಮೋಘ, ಪ್ರಭಾವಶಾಲಿ. ಈ ಧೃಶ್ಯಕಾವ್ಯ ಪ್ರತಿಯಾಬ್ಬ ವ್ಯಕ್ತಿ ನೋಡಲೇಬೇಕಾದಂತ ಸಿನಿಮಾ. ಗಿರಿರಾಜರ ಈ ಸಾಹಸಕ್ಕೆ ನಾನೇಂಧು ಚಿರಋಣಿ.

ಈ ಸಿನಿಮಾ, ನಿಮ್ಮನು ಕಾಡುವದಂಥು ಸಹಜ.. ಒಮ್ಮೆ ಈ ಸಿನಿಮಾ ನೋಡಿ, ಗರ್ವದಿಂಧ ಎಧೆತಟ್ಟಿ ಹೇಳಿ "ಇಧು ನಮ್ಮ ಕನ್ನಡ ಸಿನಿಮಾ ಆಂಡ್ರೇ" ಅಂತ!!!